ಹೊಸ ದಾಖಲೆ ಸೃಷ್ಟಿಸಿದ ಕಿಚ್ಚನ ಮಡದಿ ಪ್ರಿಯಾ. ಕಿಚ್ಚ ಸುದೀಪ್ ಚಿತ್ರರಂಗದಲ್ಲಿ ಸಾಕಷ್ಟು ದಾಖಲೆಯನ್ನ ಮಾಡಿರುವ ನಟ, ನಿರ್ದೇಶಕ, ನಿರ್ಮಾಪಕ. ಹೊಸ ದಾಖಲೆಗಳನ್ನ ಸೃಷ್ಟಿಸೋದು, ಹಳೆ ದಾಖಲೆಯನ್ನ ಮುರಿಯೋದು ಕಿಚ್ಚನ ಪಾಲಿಗೆ ಲೆಕ್ಕವೇ ಇಲ್ಲ. ಸುದೀಪ್ ಟ್ವಿಟ್ಟರ್ ನಲ್ಲಿ ಒಂದು ಮಿಲಿಯನ್ ಗಿಂತಲೂ ಹೆಚ್ಚು ಫಾಲೋವರ್ಸ್ ಪಡೆದುಕೊಂಡು ದಾಖಲೆ ಸೃಷ್ಟಿ ಮಾಡಿದ್ರು. ಈಗ ಅವರದ್ದೇ ಹಾದಿಯಲ್ಲಿ ಪತ್ನಿ ಪ್ರಿಯಾ ಸುದೀಪ್ ಕೂಡ ಹೆಜ್ಜೆ ಹಾಕಿದ್ದಾರೆ. ಪ್ರಿಯಾ ಸುದೀಪ್ ತಮ್ಮ ಟ್ವಿಟ್ಟರ್ ನಲ್ಲಿ 50 ಸಾವಿರ ಫಾಲೋವರ್ಸ್ ಹೊಂದಿದ್ದಾರೆ. ಇದನ್ನ ಗಮನಿಸಿರುವ ಕಿಚ್ಚ ಸುದೀಪ್, ಪತ್ನಿ ಪ್ರಿಯಾ ಅವ್ರಿಗೆ ಶುಭಾಶಯ ಕೋರಿದ್ದಾರೆ. ಸುದೀಪ್ ಅಭಿಮಾನಿಗಳಷ್ಟೇ ಅಲ್ಲದೆ ಪ್ರಿಯಾ ಅವ್ರಿಗೂ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಈ ಮೂಲಕ 50 ಸಾವಿರ ಟ್ವಿಟ್ಟರ್ ಫಾಲೋವರ್ ಹೊಂದಿರುವ ಮೊದಲ ಸ್ಟಾರ್ ಪತ್ನಿ ಪ್ರಿಯಾ ಆಗಲಿದ್ದಾರೆ.
Sudeep wife Priya seats a new record in Twitter. Sudeep congratulates his wife for 50k followers.